ಪಂಚಸಿಂಹಾಸನಗಳು
	ವೀರಶೈವರಿಗೆ ಬಹು ಪ್ರಮುಖ ಎನಿಸಿರುವ ಐದು ಪೀಠಗಳು; ಚಿಕ್ಕಮಗಳೂರು ಜಿಲ್ಲೆಯ ಭದ್ರಾನದಿಯ ತೀರದಲ್ಲಿರುವ ಬಾಳೇಹಳ್ಳಿ ವೀರ ಸಿಂಹಾಸನ ಮಠ, ಉಜ್ಜಯಿನಿಯ ಧರ್ಮಸಿಂಹಾಸನಮಠ, ಶ್ರೀ ಶೈಲದ ಸೂರ್ಯ ಸಿಂಹಾಸನ ಮಠ, ಕಾಶಿಯ ಜ್ಞಾನಸಿಂಹಾಸನ ಮಠ, ಕೇದಾರದ ವೈರಾಗ್ಯ ಸಿಂಹಾಸನ ಮಠ, ಇವಲ್ಲದೆ ಚಿತ್ರದುರ್ಗ, ಗದಗ, ಹುಬ್ಬಳ್ಳಿ, ಉರವ ಕೊಂಡ ಮತ್ತು ಕಲ್ಯಾಣಗಳಲ್ಲಿ ಶೂನ್ಯಸಿಂಹಾಸನ ಮಠಗಳೂ ಶಿವಗಂಗೆ, ಸುತ್ತೂರು, ರಾಜಪುರ, ಕುಂಭಕೋಣ, ನಾಗಲಾಪುರ, ದೇವನೂರುಗಳಲ್ಲಿ ವೀರಸಿಂಹಾಸನ ಮಠಗಳೂ ಸಾಕಷ್ಟು ಪ್ರಸಿದ್ಧವೆನಿಸಿವೆ.							(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ